ಶ್ರೀ ವಾಣಿವಿಜಯ ಹೈಯರ್ ಸೆಕೆಂಡರಿ ಶಾಲಾ ಪ್ರವೇಶೋತ್ಸವ
ಶ್ರೀ ವಾಣಿವಿಜಯ ಹೈಯರ್ ಸೆಕೆಂಡರಿ ಶಾಲೆ ಕೊಡ್ಲಮೊಗರು ಇಲ್ಲಿ ನಡೆದ ಶಾಲಾ ಪ್ರವೇಶೋತ್ಸವ ಸಮಾರಂಭದ ಉದ್ಘಾಟನೆಯನ್ನು ವಾರ್ಡ್ ಸದಸ್ಯರಾದ ಶ್ರೀಯುತ ಗೋಪಾಲಕೃಷ್ಣ ಪಜ್ವ ಇವರು ನೆರವೇರಿಸಿದರು .ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಭಾರತಿಯವರು ಸ್ವಾಗತಿಸಿದರು . ಹಿರಿಯ ಅಧ್ಯಾಪಕ ಚಂದ್ರಕುಮಾರ್ ಪ್ರಾಸ್ತಾಪಿಕ ಭಾಷಣಗೈದರು . ಪಿ ಟಿ ಎ ಅಧ್ಯಕ್ಷರಾದ ಉಮ್ಮರ್ ಬೋರ್ಕಳ ಮತ್ತು ಉಪಾಧ್ಯಕ್ಷರಾದ ಹಮೀದ್ ಕಣಿಯೂರ್ ಶುಭ ಹಾರೈಸಿದರು ಸ್ಟಾಫ್ ಸೆಕ್ರೆಟರಿ ಶ್ರೀ ರಾಮಚಂದ್ರರವರು ವಂದಿಸಿದರು . ಈ ಸಂದರ್ಭದಲ್ಲಿ ಹೊಸತಾಗಿ ೫ ಮತ್ತು ೮ನೇ ತರಗತಿಗಳಿಗೆ ಸೇರ್ಪಡೆಗೊಂಡ ಮಕ್ಕಳಿಗೆ ಶಾಲಾ ಅಧ್ಯಾಪಕ ಅಧ್ಯಾಪಿಕೆಯರ ಸಹಕಾರದಿಂದ ಪುಸ್ತಕ ಮತ್ತು ಪೆನ್ನುಗಳನ್ನು ವಿತರಿಸಲಾಯಿತು .